ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಕರ್ನಾಟಕ ರಾಜ್ಯದಲ್ಲಿ 2019 ರ ಜಾನುವಾರು ಗಣತಿ ಪ್ರಕಾರ ಒಟ್ಟು 110.09 ಲಕ್ಷ ಕುರಿಗಳು ಮತ್ತು 61.42 ಲಕ್ಷ ಮೇಕೆಗಳು ಇವೆ. ಭಾರತ ದೇಶದಲ್ಲಿ ಕುರಿ, ಮೇಕೆಗಳ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಸ್ಥಾನದಲ್ಲಿದೆ. ಮಾನವರಿಗೆ ಆಹಾರ, ಹಾಲು, ಉಣ್ಣೆ, ಉಡುಗೆ, ಚರ್ಮದ ವಸ್ತುಗಳು, ಗೊಬ್ಬರ ಒದಗಿಸುವಲ್ಲಿ ಕುರಿ ಮತ್ತು ಮೇಕೆಗಳ ಪಾತ್ರ ಮಹತ್ವದ್ದಾಗಿದೆ.

ಕರ್ನಾಟಕದ ಗ್ರಾಮೀಣ ಆರ್ಥಿಕತೆಯನ್ನು ಸಮರ್ಥವಾಗಿ ಕಟ್ಟಲು ಕುರಿ/ಮೇಕೆ ಪಾಲನೆಯಿಂದ ಸಾಧ್ಯವಿದೆ. ಕುರಿಮೇಕೆ ಪಾಲನೆ ಪರಂಪರೆಯಿಂದಲೂ ಸಾವಯವ, ಸುಸ್ಥಿರ ಕೃಷಿಯಾಗಿ ಬೆಳೆದು ಬಂದಿದೆ. ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿಯೇ ಇವುಗಳ ಸಂಖ್ಯೆ ಇರುವುದು. ಇವುಗಳನ್ನು ಪಾಲಿಸುತ್ತಾ ಬಂದಿರುವ ಸಮುದಾಯಗಳು ಕೂಡ ಅತ್ಯಂತ ಕೆಳವರ್ಗದ ಆರ್ಥಿಕ ಹಿನ್ನೆಲೆ ಇರುವವರೇ ಆಗಿದ್ದಾರೆ. ಇಂಥ ಹದಿನೈದು ಲಕ್ಷ ಕುಟುಂಬಗಳು ಈ ವೃತ್ತಿಯಲ್ಲಿ ನಿರತವಾಗಿವೆ. ಹಾಲು ಒಂದರಿಂದಲೇ ವಾರ್ಷಿಕವಾಗಿ 12,000 ಕೋಟಿ ರೂಪಾಯಿ ಪಡೆಯುತ್ತಿರುವ ಕರ್ನಾಟಕ, ಕುರಿ, ಆಡುಗಳ ಉತ್ಪನ್ನಗಳಾದ ಮಾಂಸ, ಚರ್ಮ, ಉಣ್ಣೆ, ಹಾಲು, ಗೊಬ್ಬರ ಇವುಗಳಿಗೆ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ನೀಡಿದರೆ, ಈ ವಲಯವನ್ನು ಸರಿಸುಮಾರು 40,000 ಕೋಟಿ ರೂಪಾಯಿಗಳವರೆಗೂ ಆರ್ಥಿಕವಾಗಿ ಹಿಗ್ಗಿಸಬಹುದಾಗಿದೆ.

ಈ ವಲಯಕ್ಕೆ ಇತ್ತೀಚೆಗೆ ಒದಗಿಬಂದಿರುವ ಮೇವಿನ ಕೊರತೆ, ನೀರಿನ ಕೊರತೆ ಇವುಗಳನ್ನು ದೂರದೃಷ್ಟಿಯ ಯೋಜನೆಗಳಿಂದ ಪರಿಹರಿಸಬಹುದಾಗಿದೆ. ಅಲ್ಲದೆ ಇವುಗಳ ಉತ್ಪನ್ನಗಳಾದ ಮಾಂಸ, ಚರ್ಮ, ಉಣ್ಣೆ, ಹಾಲು, ಗೊಬ್ಬರ-ಇವುಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗಳ ಕೌಶಲ್ಯವನ್ನು ಯುವಜನರಿಗೆ ಆಧುನಿಕ ತಾಂತ್ರಿಕತೆ ಮೂಲಕ ಕೊಟ್ಟರೆ, ಲಕ್ಷಾಂತರ ಉದ್ಯೋಗಗಳನ್ನು ಗ್ರಾಮೀಣ ವಲಯದಲ್ಲಿ ಸೃಷ್ಟಿಸಬಹುದಾಗಿದೆ.
ಇತ್ತೀಚೆಗೆ ಪದೇ ಪದೇ ಬರುತ್ತಿರುವ ಬರಗಾಲಗಳಿಂದ ಉನ್ನತ ಶಿಕ್ಷಣ ಪಡೆದವರೂ ಸೇರಿದಂತೆ, ಎಲ್ಲರೂ ಈ ಕುರಿ/ಮೇಕೆ ಪಾಲನೆಯತ್ತ ದೌಡಾಯಿಸುತ್ತಿರುವುದು ಕಂಡು ಬರುತ್ತಿದೆ. ಹಾಗಾಗಿ ಅಗಾಧವಾಗಿ ಬೆಳೆಯುವ ಸಾಧ್ಯತೆಗಳಿರುವ ಈ ವಲಯಕ್ಕೆ ಆದ್ಯತೆ ನೀಡಿ, ಸಮರ್ಪಕ ಒತ್ತು ನೀಡಿದರೆ, ಮುಂದೆ ಗ್ರಾಮೀಣ ಕರ್ನಾಟಕದ ಆರ್ಥಿಕ ಶಕ್ತಿ ಹಲವಾರು ಪಟ್ಟು ಹೆಚ್ಚಲಿದೆ. ಇದರ ಮೂಲಕ ಬರಗಾಲದಿಂದ ಪದೇ ಪದೇ ಹೊಡೆತ ತಿನ್ನುತ್ತಿರುವ ಕೃಷಿ ವಲಯವನ್ನು ಸಬಲೀಕರಣ ಮಾಡಿದಂತಾಗುತ್ತದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಕುರಿ : ಮೇಕೆ ಸಾಕಾಣಿಕೆಯಲ್ಲಿ ತೊಡಗಿರುವವರ ಹಿತರಕ್ಷಣೆಗಾಗಿ ಹಾಗೂ ಕುರಿಗಾರರು ವೈಜ್ಞಾನಿಕವಾಗಿ ಮತ್ತು ಲಾಭದಾಯಕವಾಗಿ ಕುರಿ ಮತ್ತು ಮೇಕೆ ಸಂಗೋಪನೆಯನ್ನು ಹೆಚ್ಚು ಹೆಚ್ಚಾಗಿ ಹಮ್ಮಿಕೊಳ್ಳುವಂತೆ ಪ್ರೇರೇಪಿಸಲು ಕರ್ನಾಟಕ ಸರ್ಕಾರವು 1975ನೇ ಇಸವಿಯಲ್ಲಿ “ಕರ್ನಾಟಕ ಕುರಿ ಮತ್ತು ಕುರಿ ಉತ್ಪನ್ನಗಳ ಅಭಿವೃದ್ಧಿ ಮಂಡಳಿ”ಯನ್ನು ಸ್ಥಾಪಿಸಿತ್ತು. ನಂತರ ಕುರಿ/ಮೇಕೆ ಉತ್ಪನ್ನಗಳಾದ ಮಾಂಸ, ಉಣ್ಣೆ, ಚರ್ಮ, ಹಾಲು, ಗೊಬ್ಬರಗಳನ್ನು ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಗಳಿಗೆ ಸಂಬಂಧಿತ ಕಾರ್ಯಕ್ರಮಗಳನ್ನು ರೂಪಿಸಲು ಅನುವಾಗುವಂತೆ ಮಂಡಳಿಯನ್ನು ನಿಗಮವನ್ನಾಗಿ ಕಂಪನಿ ಕಾಯ್ದೆಯಡಿ ಪರಿವರ್ತಿಸಿ, ದಿನಾಂಕ:05-12-2001 ರಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವನ್ನು ಅಸ್ತಿತ್ವಕ್ಕೆ ತರಲಾಯಿತು.

ಇತ್ತೀಚಿನ ನವೀಕರಣ​ : 21-12-2021 11:26 AM ಅನುಮೋದಕರು: Managing Director


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080