ಅಭಿಪ್ರಾಯ / ಸಲಹೆಗಳು

ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸ್ಥಾಪನೆ

ನಿಗಮ ಇಡೀ ರಾಜ್ಯಾದ್ಯಾಂತ ಕಾರ್ಯನಿರ್ವಹಿಸಲು ತನ್ನದೇ ಕಾರ್ಯಜಾಲ ಹೊಂದಲು, ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆ ಉತ್ತೇಜಿಸಲು, ಕುರಿಗಾರರು ತಮ್ಮ ಆದ್ಯತೆಗಳನ್ನು ರೂಪಿಸಲು ಅನುವಾಗುವಂತಹ ವೇದಿಕೆಯಾಗಿ, ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿದೆ. ಈ ‘ಸೊಸೈಟಿ’ಗಳ ಮೂಲಕ ಆಡಳಿತವನ್ನು ಹೆಚ್ಚು ಪಾರದರ್ಶಕಗೊಳಿಸಲು ಮತ್ತು ಎಲ್ಲರಿಗೂ ಕುರಿ/ಮೇಕೆ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಸಾಧ್ಯತೆಗಳಿವೆ.

ಈ ಸಹಕಾರ ಸಂಘಗಳು ಜನರಿಗೆ ನಿಗಮದ ಕಾರ್ಯಕ್ರಮಗಳನ್ನು ಮತ್ತು ಸೌಲಭ್ಯಗಳನ್ನು ತಲುಪಿಸುವ ಏಕೈಕ ಮಾರ್ಗಗಳಾಗಿವೆ. ಹೋಬಳಿ ಮಟ್ಟದಲ್ಲಿ ಪ್ರತಿ ಹದಿನೈದು ಸಾವಿರ ಕುರಿ-ಮೇಕೆ ಗಳಿಗೆ ಒಂದು ಸಹಕಾರ ಸಂಘದಂತೆ ಈಗಾಗಲೇ 625 ಸಹಕಾರ ಸಂಘಗಳು ಅಸ್ತಿತ್ವಕ್ಕೆ ಬಂದಿವೆ. ಈ ಸಹಕಾರ ಸಂಘಗಳೇ ನಿಗಮದ ಕೇಂದ್ರ ಬಿಂದು. ನಿಗಮದ ಪ್ರತಿ ಕಾರ್ಯಕ್ರಮಗಳನ್ನು ಇವುಗಳ ಮೂಲಕ ವಿತರಿಸುವ, ತಲುಪಿಸುವ ಬದ್ಧತೆಯನ್ನು ನಿಗಮ ತೋರಿಸುತ್ತಾ ಬಂದಿದೆ.

ಸಹಕಾರ ಸಂಘಗಳ ಮೂಲಕ ಮಾತ್ರ ಕುರಿಮೇಕೆ ಸಾಕಾಣಿಕೆದಾರರ ಆರ್ಥಿಕ, ಸಾಮಾಜಿಕ, ತಾಂತ್ರಿಕ, ಸಾಂಸ್ಕøತಿಕ ಅಭಿವೃದ್ಧಿಯನ್ನು ಸಾಧಿಸಬಹುದಾಗಿದೆ ಎಂಬುದು ನಿಗಮದ ಖಚಿತ ತಿಳುವಳಿಕೆ. ಹಾಗಾಗಿ ಕುರಿ, ಮೇಕೆಗಳ ಆರೋಗ್ಯ ರಕ್ಷಣೆ, ರೋಗ ನಿಯಂತ್ರಣ, ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಚಟುವಟಿಕೆಗಳನ್ನು ಇವುಗಳ ಮೂಲಕ ಸಾಧಿಸುವುದು ನಿಗಮದ ಮುಖ್ಯ ಧ್ಯೇಯವಾಗಿದೆ.

 

ಇತ್ತೀಚಿನ ನವೀಕರಣ​ : 23-01-2022 02:27 AM ಅನುಮೋದಕರು: Managing Directorಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080